944-973-8908 080-22211730 ಜಯಚಾಮರಾಜೇಂದ್ರ ರಸ್ತೆ, ಕನ್ನಡ ಭವನ, ಬೆಂಗಳೂರು – 560 002

ಎಂ.ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ ನೆನಪಿಗಾಗಿ “ಗೋಪಾಲಕೃಷ್ಣ ಅಡಿಗ ಮತ್ತು ಕನ್ನಡ ಸಾಹಿತ್ಯ” – ವಿಚಾರ ಸಂಕಿರಣ

ಎಂ.ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ ನೆನಪಿಗಾಗಿ “ಗೋಪಾಲಕೃಷ್ಣ ಅಡಿಗ ಮತ್ತು ಕನ್ನಡ ಸಾಹಿತ್ಯ” – ವಿಚಾರ ಸಂಕಿರಣ

February 5, 2020   0 Comments

ಕಸಾಅ/ಗೋ.ಅ.ಜ.ಶ/2019-20                                                                                          ದಿನಾಂಕ:05.02.2020

 

ಕರ್ನಾಟಕ ಸಾಹಿತ್ಯ ಅಕಾಡೆಮಿಯು ದಿನಾಂಕ:19.03.2020 ಮತ್ತು ದಿನಾಂಕ:20.03.2020 ರಂದು ಬೆಂಗಳೂರಿನ ನಯನ ಸಭಾಂಗಣದಲ್ಲಿ ಎಂ.ಗೋಪಾಲಕೃಷ್ಣ ಅಡಿಗರ ಜನ್ಮಶತಮಾನೋತ್ಸವ ನೆನಪಿಗಾಗಿ “ಗೋಪಾಲಕೃಷ್ಣ ಅಡಿಗ ಮತ್ತು ಕನ್ನಡ ಸಾಹಿತ್ಯ” ಎಂಬ ವಿಷಯದಡಿ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ. ಈ ವಿಚಾರ ಸಂಕಿರಣದಲ್ಲಿ ಪರ್ಯಾಯಗೋಷ್ಠಿಗಳು ನಡೆಯಲಿದ್ದು ಪರ್ಯಾಯಗೋಷ್ಠಿಯಲ್ಲಿ ಅಡಿಗರ ಸಾಹಿತ್ಯ ಕುರಿತಾಗಿ ಪ್ರಬಂಧ ಮಂಡಿಸುವವರು ದಿನಾಂಕ:25.02.2020ರ ಒಳಗೆ ಅಕಾಡೆಮಿಯ ಇ-ಮೇಲ್‌ಗೆಈ ಕೆಳಕಂಡ ನಿಬಂಧನೆಗೊಳಪಟ್ಟು ಪ್ರಬಂಧಗಳನ್ನು ಸಲ್ಲಿಸಲು ಕೋರಿದೆ.

ಹೆಚ್ಚಿನ ವಿವರಗಳಿಗಾಗಿ ಅಕಾಡೆಮಿಯ ವೆಬ್‌ಸೈಟ್ ಅನ್ನುwww.karnatakasahithyaacademy.org ಸಂಪರ್ಕಿಸಬಹುದಾಗಿದೆ.

ಸಹಿ/-

(ಕರಿಯಪ್ಪಎನ್.)

ರಿಜಿಸ್ಟ್ರಾರ್

ನಿಬಂಧನೆಗಳು:

  • ಪ್ರಬಂಧಗಳು ಅಡಿಗರ ಕಾವ್ಯ, ಗದ್ಯ ಸಾಹಿತ್ಯ, ಅನುವಾದ, ಕನ್ನಡ ಸಾಹಿತ್ಯಕ್ಕೆ ಅಡಿಗರ ಕೊಡುಗೆ, ನವ್ಯಸಾಹಿತ್ಯ ಮತ್ತು ಅಡಿಗರು ಹೀಗೆ ಅಡಿಗರ ಸಾಹಿತ್ಯ ಕುರಿತವುಗಳಾಗಿರಬೇಕು.
  • ನಿಮ್ಮ ಆಯ್ಕೆಯ ಅಡಿಗರಯಾವುದಾದರು ಒಂದು ಕವಿತೆಯ ಮೇಲೆ ಪ್ರಾಯೋಗಿ ಕವಿಮರ್ಶೆ ಮಾಡಿ ಪ್ರಬಂಧವನ್ನುಕಳುಹಿಸಬಹುದು.
  • ಪ್ರಬಂಧವನ್ನು ಕಳುಹಿಸುವವರು ಕಡ್ಡಾಯವಾಗಿ ಪೂರ್ಣವಿಳಾಸ, ಮೊಬೈಲ್ಸಂಖ್ಯೆ, ಇ-ಮೇಲ್ವಿಳಾಸ ನಮೂದಿಸಬೇಕು.
  • ಪ್ರಬಂಧವು 5 ಪುಟಗಳನ್ನುಮೀರಿರಬಾರದು.
  • ಪ್ರಬಂಧಗಳು ನುಡಿತಂತ್ರಾಂಶ 4.೦ದಲ್ಲಿರಬೇಕು ಮತ್ತು ಫಾಂಟ್ಸೈಜ್ 12 ಇರಬೇಕು.
  • ಅರ್ಹಪ್ರಬಂಧಗಳನ್ನು ಆಯ್ಕೆ ಮಾಡುವಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮ.
  • ಆಯ್ಕೆಯಾದ ಪ್ರಬಂಧಕಾರರಿಗೆ ಉಳಿದುಕೊಳ್ಳಲು ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಅಕಾಡೆಮಿ ಭರಿಸುತ್ತದೆ. ಯಾವುದೇ ಪ್ರೋತ್ಸಾಹ ಧನ ಅಥವಾ ಪ್ರಯಾಣಭತ್ಯೆಯನ್ನು ನೀಡಲಾಗುವುದಿಲ್ಲ.
  • ಪರ್ಯಾಯಗೋಷ್ಠಿಗೆ ಆಯ್ಕೆಯಾದ ಪ್ರಬಂಧಕಾರರಿಗೆ
  • ಪ್ರಬಂಧಗಳನ್ನು ಕಳುಹಿಸಲು ಕೊನೆಯ ದಿನಾಂಕ: 25.02.2020.

 

ಪ್ರಬಂಧಗಳನ್ನು ಈ ಕೆಳಕಂಡ ವಿಳಾಸಕ್ಕೆ ಖುದ್ದಾಗಿ / ರಿಜಿಸ್ಟರ್ಡ್ ಅಂಚೆ / ಕೊರಿಯರ್ ಮೂಲಕ ಕಳುಹಿಸಬೇಕು.

 

ಅರ್ಜಿಗಳನ್ನುಕಳುಹಿಸಬೇಕಾದವಿಳಾಸ

ರಿಜಿಸ್ಟ್ರಾರ್

ಕರ್ನಾಟಕ ಸಾಹಿತ್ಯ ಅಕಾಡೆಮಿ,

ಎರಡನೇ ಮಹಡಿ, ಕನ್ನಡಭವನ,

ಜೆ.ಸಿ.ರಸ್ತೆ, ಬೆಂಗಳೂರು560002.

ದೂ: 080-22211730/22106460

E-MAIL: sahithya.academy@gmail.com