ಕುವೆಂಪು ಸಾಹಿತ್ಯ : ಪರಿಸರಯಾನ ೩ ದಿನಗಳ ಕಮ್ಮಟ
ಕುವೆಂಪು ಸಾಹಿತ್ಯ : ಪರಿಸರಯಾನ ೩ ದಿನಗಳ ಕಮ್ಮಟ
ನಿಬಂಧನೆಗಳು:
- ಕುವೆಂಪುರವರ ಬದುಕು-ಬರಹದ ಬಗ್ಗೆ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು.
- ಕುವೆಂಪುರವರ ಬದುಕು-ಬರಹ ಕುರಿತು ಲೇಖನ ಅಥವಾ ಕೃತಿಗಳನ್ನು ಪ್ರಕಟಿಸಿರುವವರಿಗೆ ಆಧ್ಯತೆ ನೀಡಲಾಗುವುದು.
- 20ರಿಂದ 40 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು.
- ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಮೂರು ದಿನಗಳು ಶಿಬಿರದಲ್ಲೇ ವಾಸ್ತವ್ಯ ಮಾಡಬೇಕು. ಅಗತ್ಯವಿರುವ ಉಡುಪುಗಳು, ಹಾಸಲು ಮತ್ತು ಹೊದಿಕೆಗಳನ್ನು ತರುವುದು.
- ಅರ್ಜಿಯನ್ನೊಳಗೊಂಡ ಲಕೋಟೆಯ ಮೇಲ್ಭಾಗದಲ್ಲಿ ಕಡ್ಡಾಯವಾಗಿ “ಕುವೆಂಪು ಸಾಹಿತ್ಯ: ಪರಿಸರಯಾನ” ಕಮ್ಮಟಕ್ಕೆ ಅರ್ಜಿ ಎಂದು ನಮೂದಿಸಿರಬೇಕು.
ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಬಿರದ ಸ್ಥಳಕ್ಕೆ ಬಂದು ಹೋಗಲು ರಾಜಹಂಸ ಬಸ್ ದರ / ಸಾಮಾನ್ಯ ರೈಲ್ವೆ ದರವನ್ನು ನೀಡಲಾಗುವುದು. ಹಾಗೂ ಮೂರು ದಿನಗಳು ಉಟೋಪಹಾರ / ವಸತಿ ವ್ಯವಸ್ಥೆಯನ್ನು ಮಾಡಲಾಗುವುದು. - ಅಕಾಡೆಮಿ ನಿಯಮಾನುಸಾರ ಆಯ್ಕೆಯಾಗಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಪ್ರೋತ್ಸಾಹಧನ ಮತ್ತು ಪ್ರಯಾಣಭತ್ಯೆಯನ್ನು ಕಾರ್ಯಕ್ರಮ ಮುಗಿದ ನಂತರ ಬ್ಯಾಂಕ್ ಖಾತೆಗೆ ನೇರವಾಗಿ ಆರ್.ಟಿ.ಜಿ.ಎಸ್ ಮೂಲಕ ಪಾವತಿಸಲಾಗುವುದು.
- ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್ಸೈಟ್ ನಿಂದ ಪಡೆದುಕೊಳ್ಳಬಹುದು.
- ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅಕಾಡೆಮಿಯ ವೆಬ್ಸೈಟ್ http://karnatakasahithyaacademy.org ನಲ್ಲಿ ಪ್ರಕಟಿಸಲಾಗುವುದು.
- ಅಭ್ಯರ್ಥಿಗಳ ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮ.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 11.12.2020
- ಕಡ್ಡಾಯವಾಗಿ ಅರ್ಜಿಯಲ್ಲಿ ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ನಮೂದಿಸಬೇಕು. ಇಲ್ಲದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು.
- ಅರ್ಜಿಯಲ್ಲಿ ಕೋರಿರುವ ದಾಖಲೆಗಳನ್ನು ಲಗತ್ತಿಸದಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಖುದ್ದಾಗಿ / ರಿಜಿಸ್ಟ್ರರ್ ಅಂಚೆ / ಕೊರಿಯರ್ ಮೂಲಕವೇ ಕಳುಹಿಸಬೇಕು. ಇ-ಮೇಲ್ ಮೂಲಕ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ
ರಿಜಿಸ್ಟ್ರಾರ್
ಕರ್ನಾಟಕ ಸಾಹಿತ್ಯ ಅಕಾಡೆಮಿ,
ಎರಡನೇ ಮಹಡಿ, ಕನ್ನಡ ಭವನ,
ಜೆ.ಸಿ.ರಸ್ತೆ, ಬೆಂಗಳೂರು-560 002.
ದೂ: 080-22211730 / 22106460
ಅರ್ಜಿ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ : ಅರ್ಜಿ