944-973-8908 080-22211730 ಜಯಚಾಮರಾಜೇಂದ್ರ ರಸ್ತೆ, ಕನ್ನಡ ಭವನ, ಬೆಂಗಳೂರು – 560 002

“ಮಾಧ್ಯಮ ಪ್ರವೇಶಿಕೆ: ಬರಹ ಮತ್ತು ಸಂವಹನ ಕೌಶಲ” ಕಮ್ಮಟ

“ಮಾಧ್ಯಮ ಪ್ರವೇಶಿಕೆ: ಬರಹ ಮತ್ತು ಸಂವಹನ ಕೌಶಲ” ಕಮ್ಮಟ

August 31, 2021   0 Comments

“ಮಾಧ್ಯಮ ಪ್ರವೇಶಿಕೆ: ಬರಹ ಮತ್ತು ಸಂವಹನ ಕೌಶಲ” ವಿಶೇಷ ಘಟಕ ಯೋಜನೆಯಡಿ  5 ದಿನಗಳ ಕಮ್ಮಟ

ನಿಬಂಧನೆಗಳು:

  • ಪರಿಶಿಷ್ಟ ಪಂಗಡಕ್ಕೆ ಸೇರಿದ 20ರಿಂದ 45ರ ವಯೋಮಿತಿಯಲ್ಲಿರುವ ಆಸಕ್ತರು ಅರ್ಜಿ ಸಲ್ಲಿಸಬಹುದು.
  • ಮಾಧ್ಯಮ ಕ್ಷೇತ್ರದಲ್ಲಿ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು.
  • ಈಗಾಗಲೇ ಅರ್ಜಿ ಸಲ್ಲಿಸಿರುವವರು ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ.
  • ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಐದು ದಿನಗಳು ಶಿಬಿರದಲ್ಲೇ ವಾಸ್ತವ್ಯ ಮಾಡಬೇಕು.
    ಅಗತ್ಯವಿರುವ ಉಡುಪುಗಳು, ಹಾಸಲು ಮತ್ತು ಹೊದಿಕೆಗಳನ್ನು ತರುವುದು.
  • ಅರ್ಜಿಯನ್ನೊಳಗೊಂಡ ಲಕೋಟೆಯ ಮೇಲ್ಭಾಗದಲ್ಲಿ ಕಡ್ಡಾಯವಾಗಿ “ಮಾಧ್ಯಮ ಪ್ರವೇಶಿಕೆ : ಬರಹ ಮತ್ತು ಸಂವಹನ ಕೌಶಲ” ಶಿಬಿರಕ್ಕೆ ಅರ್ಜಿ ಎಂದು ನಮೂದಿಸಿರಬೇಕು.
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಬಿರದ ಸ್ಥಳಕ್ಕೆ ಬಂದು ಹೋಗಲು ರಾಜಹಂಸ ಬಸ್ ದರ / ಸಾಮಾನ್ಯ ರೈಲ್ವೆ ದರವನ್ನು ನೀಡಲಾಗುವುದು. ಹಾಗೂ ಐದು ದಿನಗಳು ಉಟೋಪಹಾರ / ವಸತಿ ವ್ಯವಸ್ಥೆಯನ್ನು ಮಾಡಲಾಗುವುದು.
  • ಅಕಾಡೆಮಿ ನಿಯಮಾನುಸಾರ ಆಯ್ಕೆಯಾಗಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಪ್ರೋತ್ಸಾಹಧನ ಮತ್ತು ಪ್ರಯಾಣಭತ್ಯೆಯನ್ನು ಕಾರ್ಯಕ್ರಮ ಮುಗಿದ ನಂತರ ಬ್ಯಾಂಕ್ ಖಾತೆಗೆ ನೇರವಾಗಿ ಆರ್.ಟಿ.ಜಿ.ಎಸ್ ಮೂಲಕ ಪಾವತಿಸಲಾಗುವುದು.
  • ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್‌ಸೈಟ್ ನಿಂದ ಪಡೆದುಕೊಳ್ಳಬಹುದು.
  • ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‍ಸೈಟ್ http://karnatakasahithyaacademy.org/ ನಲ್ಲಿ ಪ್ರಕಟಿಸಲಾಗುವುದು.
  • ಅಭ್ಯರ್ಥಿಗಳ ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮ.
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 06.09.2021
  • ಕಡ್ಡಾಯವಾಗಿ ಅರ್ಜಿಯಲ್ಲಿ ಪೂರ್ಣ ವಿಳಾಸ, ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಜಾತಿ ಪ್ರಮಾಣ ಪತ್ರ, ಆಧಾರ್‌ಕಾರ್ಡ್, ರೇಷನ್ ಕಾರ್ಡ್ ಹಾಗೂ ವಾಟ್ಸಾಪ್ ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ನಮೂದಿಸಬೇಕು. ಇಲ್ಲದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು.
  • ಅರ್ಜಿಯಲ್ಲಿ ಕೋರಿರುವ ದಾಖಲೆಗಳನ್ನು ಲಗತ್ತಿಸದಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಖುದ್ದಾಗಿ / ರಿಜಿಸ್ಟçರ್ ಅಂಚೆ / ಕೊರಿಯರ್ ಮೂಲಕವೇ ಕಳುಹಿಸಬೇಕು. ಇ-ಮೇಲ್ ಮೂಲಕ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.

 

ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ
ರಿಜಿಸ್ಟ್ರಾರ್
ಕರ್ನಾಟಕ ಸಾಹಿತ್ಯ ಅಕಾಡೆಮಿ,
ಎರಡನೇ ಮಹಡಿ, ಕನ್ನಡ ಭವನ,
ಜೆ.ಸಿ.ರಸ್ತೆ, ಬೆಂಗಳೂರು-560 002.
ದೂ: 080-22211730 / 22106460/ 29601730

 

ಅರ್ಜಿ ಮತ್ತು ನಿಭಂದನೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಅರ್ಜಿ