944-973-8908 080-22211730 ಜಯಚಾಮರಾಜೇಂದ್ರ ರಸ್ತೆ, ಕನ್ನಡ ಭವನ, ಬೆಂಗಳೂರು – 560 002

“ಭಾಷಾ ಕೌಶಲ ಮತ್ತು ಕರಡು ತಿದ್ದುವಿಕೆ” ಕಮ್ಮಟ

“ಭಾಷಾ ಕೌಶಲ ಮತ್ತು ಕರಡು ತಿದ್ದುವಿಕೆ” ಕಮ್ಮಟ

November 9, 2021   0 Comments

ಗಿರಿಜನ ಉಪಯೋಜನೆಯಡಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಏರ್ಪಡಿಸಿರುವ “ಭಾಷಾ ಕೌಶಲ ಮತ್ತು ಕರಡು ತಿದ್ದುವಿಕೆ” ಕಮ್ಮಟ

ನಿಬಂಧನೆಗಳು:

  •  ಪರಿಶಿಷ್ಟ ಪಂಗಡಕ್ಕೆ ಸೇರಿದ 20ರಿಂದ 45ರ ವಯೋಮಿತಿಯಲ್ಲಿರುವ ಆಸಕ್ತರು ಅರ್ಜಿ ಸಲ್ಲಿಸಬಹುದು.
  • ಸಾಹಿತ್ಯ ಮತ್ತು ಸಂಸ್ಕøತಿ ಬಗ್ಗೆ ಆಸಕ್ತಿ ಇರುವವರು ಅರ್ಜಿ ಸಲ್ಲಿಸಬಹುದು.
  • ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಹತ್ತು ದಿನಗಳು ಶಿಬಿರದಲ್ಲೇ ವಾಸ್ತವ್ಯ ಮಾಡಬೇಕು. ಅಗತ್ಯವಿರುವ ಉಡುಪುಗಳು, ಹಾಸಲು ಮತ್ತು ಹೊದಿಕೆಗಳನ್ನು ತರುವುದು.
  • ಅರ್ಜಿಯನ್ನೊಳಗೊಂಡ ಲಕೋಟೆಯ ಮೇಲ್ಭಾಗದಲ್ಲಿ ಕಡ್ಡಾಯವಾಗಿ “ಭಾಷಾ ಕೌಶಲ ಮತ್ತು ಕರಡು ತಿದ್ದುವಿಕೆ” ಕಮ್ಮಟಕ್ಕೆ ಅರ್ಜಿ ಎಂದು ನಮೂದಿಸಿರಬೇಕು.
  • ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಬಿರದ ಸ್ಥಳಕ್ಕೆ ಬಂದು ಹೋಗಲು ರಾಜಹಂಸ ಬಸ್ ದರ / ಸಾಮಾನ್ಯ ರೈಲ್ವೆ ದರವನ್ನು ನೀಡಲಾಗುವುದು. ಹಾಗೂ ಹತ್ತು ದಿನಗಳು ಉಟೋಪಹಾರ / ವಸತಿ ವ್ಯವಸ್ಥೆಯನ್ನು
    ಮಾಡಲಾಗುವುದು.
  • ಅಕಾಡೆಮಿ ನಿಯಮಾನುಸಾರ ಆಯ್ಕೆಯಾಗಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಪ್ರೋತ್ಸಾಹಧನ ಮತ್ತು ಪ್ರಯಾಣಭತ್ಯೆಯನ್ನು ಕಾರ್ಯಕ್ರಮ ಮುಗಿದ ನಂತರ ಬ್ಯಾಂಕ್ ಖಾತೆಗೆ ನೇರವಾಗಿ ಆರ್.ಟಿ.ಜಿ.ಎಸ್ ಮೂಲಕ ಪಾವತಿಸಲಾಗುವುದು.
  • ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್‍ಸೈಟ್ ನಿಂದ ಪಡೆದುಕೊಳ್ಳಬಹುದು.  ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ವೆಬ್‍ಸೈಟ್ http://karnatakasahithyaacademy.org/  ನಲ್ಲಿ ಪ್ರಕಟಿಸಲಾಗುವುದು.
  • ಅಭ್ಯರ್ಥಿಗಳ ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮ.  ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 30-11-2021
  • ಕಡ್ಡಾಯವಾಗಿ ಅರ್ಜಿಯಲ್ಲಿ ಪೂರ್ಣ ವಿಳಾಸ, ಎಸ್.ಎಸ್.ಎಲ್.ಸಿ. ಅಂಕಪಟ್ಟಿ ಜಾತಿ ಪ್ರಮಾಣ ಪತ್ರ, ಆಧಾರ್‍ಕಾರ್ಡ್, ರೇಷನ್ ಕಾರ್ಡ್ ಹಾಗೂ ವಾಟ್ಸಾಪ್ ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ
    ನಮೂದಿಸಬೇಕು. ಇಲ್ಲದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು.
  • ಅರ್ಜಿಯಲ್ಲಿ ಕೋರಿರುವ ದಾಖಲೆಗಳನ್ನು ಲಗತ್ತಿಸದಿದ್ದಲ್ಲಿ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
    ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಖುದ್ದಾಗಿ / ರಿಜಿಸ್ಟ್ರರ್ ಅಂಚೆ / ಕೊರಿಯರ್ ಮೂಲಕವೇ
    ಕಳುಹಿಸಬೇಕು. ಇ-ಮೇಲ್ ಮೂಲಕ ಕಳುಹಿಸಿದ ಅರ್ಜಿಗಳನ್ನು ಪರಿಗಣಿಸುವುದಿಲ್ಲ.

ಅರ್ಜಿಗಳನ್ನು ಕಳುಹಿಸಬೇಕಾದ ವಿಳಾಸ
ರಿಜಿಸ್ಟ್ರಾರ್
ಕರ್ನಾಟಕ ಸಾಹಿತ್ಯ ಅಕಾಡೆಮಿ,
ಎರಡನೇ ಮಹಡಿ, ಕನ್ನಡ ಭವನ,
ಜೆ.ಸಿ.ರಸ್ತೆ, ಬೆಂಗಳೂರು-560 002. ದೂ: 080-22211730 / 22106460/ 29601730

ಅರ್ಜಿ ಮತ್ತು ನಿಭಂದನೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಅರ್ಜಿ