ಮಧುರಚೆನ್ನ ದತ್ತಿನಿಧಿ ಬಹುಮಾನ

ಮಧುರಚೆನ್ನ ದತ್ತಿನಿಧಿ ಬಹುಮಾನ

  • `ಮಧುರಚೆನ್ನರ ಜನ್ಮಶತಮಾನೋತ್ಸವ’ದ ನಿಮಿತ್ತ ಅವರ ಹೆಸರಿನಲ್ಲಿ ಅಕಾಡೆಮಿಯಲ್ಲಿ ಒಂದು ದತ್ತಿನಿಧಿಯನ್ನು ಸ್ಥಾಪಿಸಲು ರೂ.50,000/-(ರೂಪಾಯಿ ಐವತ್ತು ಸಾವಿರ ಮಾತ್ರ)ಗಳನ್ನು ಡಾ. (ಶ್ರೀಮತಿ) ಉಮಾ ಬಿದರಿ ಹಾಗೂ ಮಧುರಚೆನ್ನರ ಶಿಷ್ಯರು ಒಟ್ಟಾಗಿ ಸೇರಿ ನೀಡಿರುತ್ತಾರೆ.
  • ಸದರಿ ಮೊತ್ತವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅನುದಾನ ಖಾತೆಯನ್ನು ಹೊಂದಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಲ್ಲಿ ನಿಶ್ಚಿತ ಠೇವಣಿಯಾಗಿ ಇಟ್ಟು, ಅದರಿಂದ ಬರುವ ಬಡ್ಡಿಯನ್ನು ಪುಸ್ತಕ ಬಹುಮಾನ ಯೋಜನೆ’ಯ ನಿಯಮಗಳ ಅನುಸಾರ ಪ್ರತಿವರ್ಷ “ಲೇಖಕರ ಮೊದಲ ಕೃತಿ” ಪ್ರಕಾರದಲ್ಲಿ ಅತ್ಯುತ್ತಮವೆಂದು ನಿರ್ಣಯಿಸಲ್ಪಡುವ ಕೃತಿಗೆ ಬಹುಮಾನವಾಗಿ ನೀಡಲಾಗುವುದು.
  • ಇದು ಪ್ರತ್ಯೇಕ ಬಹುಮಾನವಾಗಿರದೆ, `ಪುಸ್ತಕ ಬಹುಮಾನ’ ಯೋಜನೆಯಡಿ `ಲೇಖಕರ ಮೊದಲ ಕೃತಿ’ಗೆ ನೀಡುವ ಬಹುಮಾನವಾಗಿರುತ್ತದೆ.
  • ಈ ಬಹುಮಾನವನ್ನು “ಮಧುರಚೆನ್ನ ದತ್ತಿನಿಧಿ ಬಹುಮಾನ” ಎಂದು ಕರೆಯಲಾಗುವುದು.