944-973-8908 080-22211730 ಜಯಚಾಮರಾಜೇಂದ್ರ ರಸ್ತೆ, ಕನ್ನಡ ಭವನ, ಬೆಂಗಳೂರು – 560 002

ಮೈಸೂರು ವಿಭಾಗ ಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಚಿಂತನ – ಮಂಥನ ಕಮ್ಮಟ

ಮೈಸೂರು ವಿಭಾಗ ಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಚಿಂತನ – ಮಂಥನ ಕಮ್ಮಟ

May 8, 2017   0 Comments

ಕ್ರ.ಕಸಾಅ/ಅಂಚಿಂಮಂಕಮ್ಮಟ /2017-18ದಿನಾಂಕ: 04-05-2017

ಪ್ರಕಟಣೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯು 2017ರ ಜೂನ್ ಮತ್ತು ಜುಲೈ ತಿಂಗಳಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ವಿಶೇಷ ಘಟಕ / ಗಿರಿಜನ ಉಪಯೋಜನೆ/ಸಾಮಾನ್ಯ ಯೋಜನೆಯಡಿಯಲ್ಲಿ ಆಸಕ್ತ ಅಭ್ಯರ್ಥಿಗಳಿಗಾಗಿ ಮೈಸೂರು ವಿಭಾಗ ಮಟ್ಟದಲ್ಲಿ ವಸತಿ ಸಹಿತ ಎರಡು ದಿನಗಳ “ ಡಾ. ಬಿ.ಆರ್. ಅಂಬೇಡ್ಕರ್ ಚಿಂತನ – ಮಂಥನ” (ರಾಷ್ಟ್ರದ ಅಭಿವೃದ್ಧಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆ ಕುರಿತ ಕಮ್ಮಟ) ಕಮ್ಮಟವನ್ನು ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದೆ.

 • ಮೈಸೂರು ವಿಭಾಗದ ಯಾವುದೇ ಜಿಲ್ಲೆಗೆ (ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು)ಸೇರಿರುವ 18ರಿಂದ 40ರ ವಯೋಮಿತಿ ಯಲ್ಲಿರುವ ವಿದ್ಯಾರ್ಥಿಗಳು , ಶಿಕ್ಷಕರು-ಉಪನ್ಯಾಸಕರು ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
 • ವಯಸ್ಸಿಗೆ ಸಂಬಂಧಿಸಿದಂತೆ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ದೃಢೀಕೃತ ಪಟ್ಟಿಯನ್ನು ಲಗತ್ತಿಸಬೇಕು.
 • ಜಾತಿಗೆ ಸಂಬಂಧಿಸಿದಂತೆ ದೃಢೀಕೃತ ಜಾತಿ ಪ್ರಮಾಣಪತ್ರದ ಪ್ರತಿಯನ್ನು ಕಡ್ಡಾಯವಾಗಿ ಲಗತ್ತಿಸಬೇಕು.
 • ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಎರಡು ದಿನಗಳು ಶಿಬಿರದಲ್ಲೇ ವಾಸ್ತವ್ಯ ಮಾಡಬೇಕು.
 • ಅರ್ಜಿಯನ್ನೊಳಗೊಂಡ ಲಕೋಟೆಯ ಮೇಲ್ಭಾಗದಲ್ಲಿ ಕಡ್ಡಾಯವಾಗಿ “ ಡಾ. ಬಿ.ಆರ್. ಅಂಬೇಡ್ಕರ್ ಚಿಂತನ – ಮಂಥನ ಮೈಸೂರು ವಿಭಾಗ ಕಮ್ಮಟ ” ಕ್ಕೆ ಅರ್ಜಿ ಎಂದು ನಮೂದಿಸಿರಬೇಕು.
 • ಆಯ್ಕೆಯಾದ ಅಭ್ಯರ್ಥಿಗಳಿಗೆ ಶಿಬಿರದ ಸ್ಥಳಕ್ಕೆ ಬಂದು ಹೋಗಲು ರಾಜಹಂಸ ಬಸ್ ದರ / ಸಾಮಾನ್ಯ ರೈಲ್ವೆ ದರವನ್ನು ನೀಡಲಾಗುವುದು. ಹಾಗೂ ಎರಡು ದಿನಗಳು ಊಟ, ಉಪಹಾರದ ವ್ಯವಸ್ಥೆ ಯನ್ನು ಮಾಡಲಾಗುವುದು.
 • ಆಸಕ್ತ ಅಭ್ಯರ್ಥಿಗಳು ಅರ್ಜಿ ನಮೂನೆಯನ್ನು ಅಕಾಡೆಮಿಯ ವೆಬ್ ಸೈಟ್ ನಿಂದ ಪಡೆದುಕೊಳ್ಳ ಬಹುದು.
 • ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಜೂನ್ ಮೊದಲ ವಾರದಲ್ಲಿ ಅಕಾಡೆಮಿಯ ವೆಬ್ಸೈಟ್
  http://karnatakasahithyaacademy.org ನಲ್ಲಿಪ್ರಕಟಿಸಲಾಗುವುದು.
 • ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮ.
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-05-2017
 • ಕಡ್ಡಾಯವಾಗಿ ಅರ್ಜಿಯಲ್ಲಿ ಪೂರ್ಣವಿಳಾಸ, ಮೊಬೈಲ್ ಸಂಖ್ಯೆ . ಇ-ಮೇಲ್ ವಿಳಾಸ ನಮೂದಿಸಬೇಕು. ಇಲ್ಲದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು.
 • ಅಭ್ಯರ್ಥಿಗಳು ಈ ಕೆಳಕಂಡ ವಿಷಯಗಳನ್ನು ಅಭ್ಯಾಸ ಮಾಡಿಯೇ ಕಮ್ಮಟಕ್ಕೆ ಹಾಜರಾಗಬೇಕು.
  • ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಶಿಕ್ಷಣ
  • ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಕಾರ್ಮಿಕ ಸಮುದಾಯ
  • ಡಾ. ಬಿ.ಆರ್.ಅಂಬೇಡ್ಕರ್ ಮತ್ತು ರೈತ ಸಮುದಾಯ
  • ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಮಹಿಳಾ ಸಮುದಾಯ
  • ಡಾ. ಬಿ.ಆರ್. ಅಂಬೇಡ್ಕರ್ – ವರ್ಣ, ಜಾತಿ ಮತ್ತು ಅಸ್ಪೃಶ್ಯತೆ
  • ಡಾ. ಬಿ.ಆರ್. ಅಂಬೇಡ್ಕರ್ – ಸಾಮಾಜಿಕ ವಿಮೋಚನೆ
  • ಡಾ. ಬಿ.ಆರ್. ಅಂಬೇಡ್ಕರ್ – ಧಾರ್ಮಿಕ ಚಿಂತನೆಗಳು
  • ಡಾ. ಬಿ.ಆರ್. ಅಂಬೇಡ್ಕರ್ – ಆರ್ಥಿ ಕ ಚಿಂತನೆಗಳು
  • ಡಾ. ಬಿ.ಆರ್. ಅಂಬೇಡ್ಕರ್ – ನೀರಾವರಿ ಕುರಿತ ಚಿಂತನೆಗಳು
  • ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಪ್ರಜಾಪ್ರಭುತ್ವದ ಚಿಂತನೆಗಳು
  • ಡಾ. ಬಿ.ಆರ್. ಅಂಬೇಡ್ಕರ್ ಮತ್ತು ತಳಸಮುದಾಯದ ಹಕ್ಕುಗಳು
  • ಡಾ. ಬಿ.ಆರ್. ಅಂಬೇಡ್ಕರ್ ರಾಷ್ಟ್ರೀಯತೆ ಮತ್ತು ಪ್ರಬುದ್ಧ ಭಾರತದ ಕಲ್ಪನೆ
 • ಅರ್ಜಿಯನ್ನುಈ ಕೆಳಕಂಡ ವಿಳಾಸಕ್ಕ ಕಳುಹಿಸಬೇಕು.
 •    ಡಾ. ಎಸ್.ನರೇಂದ್ರಕುಮಾರ್
     ಸಮನ್ವಯಾಧಿಕಾರಿಗಳು, ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ
     ಮೈಸೂರು ವಿಶ್ವವಿದ್ಯಾನಿಲಯ, ಮಾನಸಗಂಗೋತ್ರಿ,
     ಮೈಸೂರು- 570006 (94818 18439)

ಡಾ. ಎಸ್.ನರೇಂದ್ರಕುಮಾರ್
ಸಮನ್ವಯಾಧಿಕಾರಿಗಳು
ಮೈಸೂರು ವಿಶ್ವವಿದ್ಯಾನಿಲಯ
ಸಿ.ಎಚ್.ಭಾಗ್ಯ
ರಿಜಿಸ್ಟ್ರಾರ್
ಕರ್ನಾಟಕ ಸಾಹಿತ್ಯ ಅಕಾಡೆಮಿ
ಅಶೋಕ್ ಎನ್. ಚಲವಾದಿ
ಆಡಳಿತಾಧಿಕಾರಿಗಳು
ಕರ್ನಾಟಕ ಸಾಹಿತ್ಯ ಅಕಾಡೆಮಿ

ಅರ್ಜಿ ಡೌನ್ಲೋಡ್ ಮಾಡಲೂ ಇಲ್ಲಿ ಕ್ಲಿಕ್ ಮಾಡಿ: ಅರ್ಜಿ