944-973-8908 080-22211730 ಜಯಚಾಮರಾಜೇಂದ್ರ ರಸ್ತೆ, ಕನ್ನಡ ಭವನ, ಬೆಂಗಳೂರು – 560 002

ಬೆಂಗಳೂರು ವಿಭಾಗ ಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಚಿಂತನ – ಮಂಥನ ಕಮ್ಮಟ

ಬೆಂಗಳೂರು ವಿಭಾಗ ಮಟ್ಟದ ಡಾ. ಬಿ.ಆರ್. ಅಂಬೇಡ್ಕರ್ ಚಿಂತನ – ಮಂಥನ ಕಮ್ಮಟ

May 27, 2017   0 Comments

ಕ್ರ.ಕಸಾಅ/ಅಚಿಚಿಂಮಂಕಮ್ಮಟ/2017-18ದಿನಾಂಕ: 26-05-2017

ಪ್ರಕಟಣೆ

ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬೆಂಗಳೂರಿನ ಸ್ಫೂರ್ತಿಧಾಮದ ಸಹಯೋಗದಲ್ಲಿ 2017ರ ಜೂನ್ ಮತ್ತು ಜುಲೈ ತಿಂಗಳಲ್ಲಿ ಬೆಂಗಳೂರು ವಿಭಾಗ ಮಟ್ಟದಲ್ಲಿ ವಸತಿ ಸಹಿತ ಎರಡು ದಿನಗಳ “ಡಾ. ಬಿ.ಆರ್. ಅಂಬೇಡ್ಕರ್ ಚಿಂತನ-ಮಂಥನ” (ರಾಷ್ಟ್ರದ ಅಭಿವೃದ್ಧಿಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಿಚಾರಧಾರೆ ಕುರಿತ ಕಮ್ಮಟ) ಕಮ್ಮಟವನ್ನು ಸ್ಫೂರ್ತಿಧಾಮ, ಅಂಜನಾನಗರ, ಮಾಗಡಿ ರಸ್ತೆ, ಬೆಂಗಳೂರು-560091 ಇಲ್ಲಿ ಹಮ್ಮಿಕೊಳ್ಳಲಾಗುವುದು.

 • ಬೆಂಗಳೂರು ವಿಭಾಗದಲ್ಲಿ ಬರುವ (ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಶಿವಮೊಗ್ಗ, ದಾವಣಗೆರೆ) 18ರಿಂದ 40ರ ವಯೋಮಿತಿಯಲ್ಲಿರುವ ವಿದ್ಯಾರ್ಥಿಗಳು, ಶಿಕ್ಷಕರು-ಉಪನ್ಯಾಸಕರು ಹಾಗೂ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
 • ಆಯ್ಕೆಯಲ್ಲಿ ಅಕಾಡೆಮಿಯ ತೀರ್ಮಾನವೇ ಅಂತಿಮ.
 • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31-05-2017
 • ಕಡ್ಡಾಯವಾಗಿ ಅರ್ಜಿಯಲ್ಲಿ ಪೂರ್ಣವಿಳಾಸ, ಮೊಬೈಲ್ ಸಂಖ್ಯೆ, ಇ-ಮೇಲ್ ವಿಳಾಸ ನಮೂದಿಸಬೇಕು. ಇಲ್ಲದಿದ್ದರೆ ಅರ್ಜಿಯನ್ನು ತಿರಸ್ಕರಿಸಲಾಗುವುದು.

  ಅರ್ಜಿ ನಮೂನೆಯನ್ನು ಸಾಹಿತ್ಯ ಅಕಾಡೆಮಿಯ ವೆಬ್ ಸೈಟ್ www.karnatakasahithyaacademy.org ಹಾಗೂ ಸ್ಫೂರ್ತಿಧಾಮದ ವೆಬ್ ಸೈಟ್ www.spoorthidhama.com ನೋಡಿ.

 • ಅರ್ಜಿಯನ್ನು ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

     ಶ್ರೀ ಅಶೋಕ್ ಎನ್. ಚಲವಾದಿ
     ಆಡಳಿತಾಧಿಕಾರಿಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ
     ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು- 560002
     (080-22211730 , 22106460)

ಸಿ.ಎಚ್.ಭಾಗ್ಯ ಅಶೋಕ್ ಎನ್. ಚಲವಾದಿ
ರಿಜಿಸ್ಟ್ರಾರ್ ಆಡಳಿತಾಧಿಕಾರಿಗಳು
ಕರ್ನಾಟಕ ಸಾಹಿತ್ಯ ಅಕಾಡೆಮಿ ಕರ್ನಾಟಕ ಸಾಹಿತ್ಯ ಅಕಾಡೆಮಿ

ಅರ್ಜಿ ಡೌನ್ಲೋಡ್ ಮಾಡಲೂ ಇಲ್ಲಿ ಕ್ಲಿಕ್ ಮಾಡಿ: ಅರ್ಜಿ