944-973-8908 080-22211730 ಜಯಚಾಮರಾಜೇಂದ್ರ ರಸ್ತೆ, ಕನ್ನಡ ಭವನ, ಬೆಂಗಳೂರು – 560 002

ದಿನಾಂಕ: 19.08.2017 ರಂದು ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ತೆಗೆದುಕೊಂಡ ನಿಲುವುಗಳು

ದಿನಾಂಕ: 19.08.2017 ರಂದು ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ತೆಗೆದುಕೊಂಡ ನಿಲುವುಗಳು

August 21, 2017   0 Comments

ದಿನಾಂಕ: 19-08-2017

ದಿನಾಂಕ: 19.08.2017 ರಂದು ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸರ್ವಸದಸ್ಯರ ಸಭೆಯಲ್ಲಿ ತೆಗೆದುಕೊಂಡ ನಿಲುವುಗಳು

“ಸಾಹಿತ್ಯ ಅಕಾಡೆಮಿ ನಿಮ್ಮ ಹೃದಯದಲ್ಲಿ; ಭಾಷೆ- ಸಾಹಿತ್ಯ- ಸಂಸ್ಕೃತಿ ನಿಮ್ಮ ಬೆರಳಲ್ಲಿ” ಎಂಬ ಚಿಂತನೆಯ ಮಾರ್ಗಕ್ಕೆ ಮೊದಲ ಆದ್ಯತೆ ನೀಡುವುದು ನಮ್ಮ ಉದ್ದೇಶವಾಗಿದೆ.

ಸಾಹಿತ್ಯ ಮತ್ತು ಭಾಷೆಯ ವಸ್ತು – ವಿಚಾರಗಳನ್ನು ಡಿಜಿಟಲೀಕರಣಗೊಳಿಸುವುದು, ಕನ್ನಡಿಗರು ಕನ್ನಡಮಯವಾಗಿರುವಂತೆ ಪ್ರೇರೇಪಿಸುವುದು. ನಾಡ ಕನ್ನಡಿಗರಿಗೆ ಕೊಡುವಷ್ಟೇ ಮಹತ್ವವನ್ನು ಗಡಿನಾಡ ಹಾಗೂ ಹೊರನಾಡ ಕನ್ನಡಿಗರಿಗೆ ಕೊಡುವುದು ಮತು ್ತಕನ್ನಡ ಭಾಷೆ-ಸಾಹಿತ್ಯದ ಡಿಜಿಟಲೀಕರಣದ ಮೂಲಕ ಹಾಗೂ ಸಾಮಾಜಿಕ ಮಾಧ್ಯಮಗಳ ಮೂಲಕ ಅವರನ್ನು ತಲುಪುವುದು ನಮ್ಮ ಧ್ಯೇಯವಾಗಿದೆ.

ಈ ಕಾರಣಗಳ ಹಿನ್ನೆಲೆಯಲ್ಲಿ ಅಕಾಡೆಮಿಯ ವೆಬ್‍ಸೈಟ್‍ನ್ನು ಉನ್ನತೀಕರಣ ಗೊಳಿಸಬೇಕೆಂದಿದ್ದೇವೆ. ಟ್ವಿಟರ್ – ಫೇಸ್ ಬುಕ್ – ಗೂಗಲ್ ಪ್ಲಸ್‍ಗಳಲ್ಲಿ ಅಕಾಡೆಮಿಯ ಖಾತೆಯನ್ನು ತೆರೆಯುವುದು. ಆ ಮೂಲಕ ಸಾಮಾಜಿಕ ಮಾಧ್ಯಮದಲ್ಲಿಯ ಯುವ ಶಕ್ತಿಯನ್ನು ಸಾಹಿತ್ಯದ ಮಾಧ್ಯಮಕ್ಕೆ ಸೆಳೆಯುವ ಉದ್ದೇಶವನ್ನು ಹೊಂದಿದ್ದೇವೆ.

ಇದರ ಮುಂದುವರಿಕೆಯ ಭಾಗವಾಗಿ `ಬಂಗಾರದ ಎಲೆಗಳು’ ಎಂಬ ಯೋಜನೆಯ ಅಡಿಯಲ್ಲಿ ಸಾಹಿತಿಗಳ ಕೋಶವನ್ನು ಹೊರತರುವ ಆಲೋಚನೆ ನಮ್ಮದಾಗಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿಗೆ ಇದು ಜೀವಕೋಶವಿದ್ದಂತೆ ಎಂಬುದು ನಮ್ಮ ನಂಬಿಕೆ. ಸಮಗ್ರವಾಗಿ ಹೊಸಗನ್ನಡ ಸಾಹಿತ್ಯದ ಲೇಖಕರ ಮೂಲಭೂತ ಸಂಗತಿಗಳನ್ನೊಳಗೊಂಡ ಪರಿಚಯದ ಗ್ರಂಥಗಳು ನಮ್ಮಲ್ಲಿಲ್ಲ. ಬಿಡಿಬಿಡಿಯಾಗಿ ಕೆಲವು ದೊರೆತರೂ ಅವು ಸಮಗ್ರವಲ್ಲ. ಅಕಾಡೆಮಿಯಲ್ಲಿ ಸಾಹಿತಿಗಳ ಸಮಗ್ರ ಕೋಶ ಇರುವುದು ಅನಿವಾರ್ಯ ಮತ್ತು ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಯೋಜನೆಯ ಸ್ವರೂಪವನ್ನು ಗುರುತಿಸಲು ಸ್ಥಾಯಿ ಸಮಿತಿಗೆ ಒಪ್ಪಿಸಿದೆ. ಹಾಗೂ ಈ ಕೆಳಕಂಡ ಸಂಗತಿಗಳನ್ನು ಯೋಜನೆಯಲ್ಲಿ ಅನುಸರಿಸಲು ಸೂಚಿಸಿದೆ.

  • ಕನ್ನಡದ ಎಲ್ಲ ಸಾಹಿತಿಗಳ ಪ್ರಾಥಮಿಕ ವಿವರಗಳು ಸಾಹಿತ್ಯ ಅಕಾಡೆಮಿಯಲ್ಲಿ ಇರಬೇಕು.
  • ನವೋದಯ ಪೂರ್ವದ ಕೆಂಪು ನಾರಾಯಣನ ಮುದ್ರಾಮಂಜೂಷ ಕೃತಿಯಿಂದ ಪ್ರಾರಂಭಿಸಿ ಇಂದಿನ ಕಾಲದವರೆಗಿನ – (1820 ರಿಂದ 2020) ಲೇಖಕರು ಇದರಲ್ಲಿ ಒಳಗೊಳ್ಳುತ್ತಾರೆ.
  • ಇದು ಅಕಾರಾದಿಯಲ್ಲಿ ಸಂಯೋಜನೆಗೊಳ್ಳಬೇಕಾಗಿದ್ದು, ಅಕಾಡೆಮಿಯ ವೆಬ್ ಸೈಟ್‍ನಲ್ಲಿ ಲಭ್ಯವಾಗುವಂತಾಗಬೇಕು ಹಾಗೂ ಮುದ್ರಣ ಮಾಧ್ಯಮದಲ್ಲಿಯೂ ಪ್ರಕಟಗೊಳ್ಳಬೇಕು.
  • ಲೇಖಕನ ಹುಟ್ಟಿದ ದಿನಾಂಕ, ಊರು, ಉದ್ಯೋಗ, ಉದ್ಯೋಗ ಮಾಡಿದ ಸ್ಥಳಗಳು, ತಂದೆ ತಾಯಿ ಹೆಸರು, ಕುಟುಂಬದ ಸಂಕ್ಷಿಪ್ತ ವಿವರ, ಪ್ರಕಟಿತ ಕೃತಿಗಳು, ಪ್ರಶಸ್ತಿಗಳು, ಸಂದ ಗೌರವಗಳು, ವ್ಯಕ್ತಿತ್ವದ ಕುರಿತು ಸಂಕ್ಷಿಪ್ತವಾಗಿ ನಿರೂಪಿಸುವುದು.

`ಬಂಗಾರದ ಎಲೆಗಳು’ ಎಂಬ ಯೋಜನೆಯ ಅಡಿಯಲ್ಲಿ ಹೊರತರುವ ಸಾಹಿತಿಗಳ ಕೋಶಕ್ಕೆ ಲೇಖಕರು ತಮ್ಮ ವೈಯಕ್ತಿಕ ವಿವರಗಳನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಇ-ಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು.
ಈ ಯೋಜನೆಯಲ್ಲದೆ ಬೇರೆ ಯೋಜನೆಗಳನ್ನು ರೂಪಿಸಲು ನಾಡಿನ ಗಣ್ಯ ಸಾಹಿತಿಗಳು ಹಾಗೂ ವಿಮರ್ಶಕರ ಸಭೆಯೊಂದನ್ನು ಕರೆದು ಅವರೊಂದಿಗೆ ಸಮಾಲೋಚಿಸಿ ಹೊಸ ಯೋಜನೆಗಳ ರೂಪುರೇಷೆಯನ್ನು ಸಿದ್ಧಪಡಿಸುವ ಆಲೋಚನೆ ಇದೆ. ಅದೇ ರೀತಿ ಯುವಲೇಖಕರ ಸಭೆಯೊಂದನ್ನು ಕರೆದು ಅವರೊಂದಿಗೆ ಸಮಾಲೋಚಿಸಿ ಸಲಹೆಗಳನ್ನು ಪಡೆಯುವ ವಿಚಾರವಿದೆ. ಈ ಚರ್ಚೆಯ ಅನಂತರ ಸರ್ವಸದಸ್ಯರ ಸಭೆಯಲ್ಲಿಟ್ಟು ಪ್ರಕಟಿಸಲಾಗುವುದು.

   ಪ್ರೊ. ಅರವಿಂದ ಮಾಲಗತ್ತಿ
   ಅಧ್ಯಕ್ಷರು
   ಕರ್ನಾಟಕ ಸಾಹಿತ್ಯ ಅಕಾಡೆಮಿ
   ಬೆಂಗಳೂರು