ಅಮೆರಿಕಾ ಕನ್ನಡಿಗರ ದತ್ತಿನಿಧಿ

ಅಮೆರಿಕಾ ಕನ್ನಡಿಗರ ದತ್ತಿನಿಧಿ

1. ಅಮೆರಿಕಾ ಕನ್ನಡಿಗರ ಹಾಗೂ ಕನ್ನಡ ಸಂಘಗಳ ವಿಶೇಷ ಬಹುಮಾನ ಯೋಜನೆ:

ಅ) ಈ ಬಹುಮಾನದ ಹೆಸರು `ಅಮೆರಿಕಾ ಕನ್ನಡಿಗರ ಮತ್ತು ಕನ್ನಡ ಸಂಘಗಳ ವಿಶೇಷ ಬಹುಮಾನ’ ಎಂದು ಇರತಕ್ಕದ್ದು.

ಆ) ಆ ವಿಶೇಷ ಬಹುಮಾನದ ಮೊತ್ತ ಐದು ಸಾವಿರ ರೂಪಾಯಿಗಳು.

ಇ) ಈ ಬಹುಮಾನವನ್ನು ಪ್ರತಿ ವರ್ಷವೂ ಕನ್ನಡದಿಂದ ಇಂಗ್ಲಿಷ್‍ಗೆ ಅನುವಾದಿತವಾದ ವರ್ಷದ ಶ್ರೇಷ್ಠ ಸೃಜನಾತ್ಮಕ ಕೃತಿಯೊಂದಕ್ಕೆ ನೀಡಲಾಗುತ್ತದೆ.

ಈ) ಈ ವಿಶೇಷ ಬಹುಮಾನಕ್ಕೆ ಪರಿಗಣಿತವಾಗುವ ಕೃತಿ ಒಂದು ನೂರು ಪುಟಗಳಿಗಿಂತ ಕಡಿಮೆಯ ಗಾತ್ರದ್ದಾಗಿರಬಾರದು. ಆದರೆ ಈ ನಿಯಮ ಕಾವ್ಯ, ನಾಟಕಗಳಿಗೆ ಅನ್ವಯಿಸುವುದಿಲ್ಲ.

ಉ) ಈಗಾಗಲೇ ಪುಸ್ತಕ ಬಹುಮಾನಗಳಿಗೆ ಸಂಬಂಧಿಸಿದಂತೆ ಅಕಾಡೆಮಿ ರೂಪಿಸಿರುವ ನಿಯಮಾಮಳಿಗಳೇ ಇದರ ಪರಿಶೀಲನೆ ಹಾಗೂ ತೀರ್ಮಾನದ ವಿಧಾನಕ್ಕೆ ಅನ್ವಯಿಸುತ್ತವೆ.

ಸೂಚನೆ:
ಈ ಸಂಬಂಧವಾಗಿ ಅಮೆರಿಕಾ ಕನ್ನಡಿಗರ ಹಾಗೂ ಕನ್ನಡ ಸಂಘಗಳ ಕೊಡುಗೆಯಾಗಿ ಬಂದ ಅರವತ್ತು ಸಾವಿರ ರೂಪಾಯಿಗಳ ಮೊತ್ತದ ನಿಶ್ಚಿತ ನಿಧಿಯಿಂದ ಬರುವ ಬಡ್ಡಿಯಿಂದ ಈ ಬಹುಮಾನದ ಯೋಜನೆ ಪ್ರಾರಂಭವಾಗಿದೆ.