ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ

ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ

1. ಸಿಂಪಿ ಲಿಂಗಣ್ಣ ಅವರ ಜನ್ಮಶತಮಾನೋತ್ಸವದ ನಿಮಿತ್ತ ಅವರ ಮಕ್ಕಳಾದ ಪ್ರೊ. ವೀರೇಂದ್ರ ಸಿಂಪಿ ಮತ್ತು
ಸಹೋದರರು ಸಿಂಪಿ ಲಿಂಗಣ್ಣ ಅವರ ಹೆಸರಿನಲ್ಲಿ ಅಕಾಡೆಮಿಯಲ್ಲಿ ಒಂದು ದತ್ತಿನಿಧಿಯನ್ನು ಸ್ಥಾಪಿಸಲು ಒಟ್ಟು ರೂ 60,000 (ಅರವತ್ತು ಸಾವಿರ ಮಾತ್ರ) ಮೊಬಲಗನ್ನು ನೀಡಿರುತ್ತಾರೆ. ಇದರಲ್ಲಿ ರೂ 5,000ದಷ್ಟನ್ನು ಬಹುಮಾನಕ್ಕೆ ಬಳಸಿಕೊಂಡು ಉಳಿದ ರೂ 55,000ದಷ್ಟನ್ನು ಬ್ಯಾಂಕಿನಲ್ಲಿ ನಿಗದಿತ ಠೇವಣಿಯಾಗಿ ಇಡಲಾಗಿದೆ.

2. ಇದರಿಂದ ಬರುವ ಬಡ್ಡಿಯಲ್ಲಿ ರೂ 5,000ದಷ್ಟು ಮೊಬಲಗನ್ನು `ಪುಸ್ತಕ ಬಹುಮಾನ ಯೋಜನೆ’ಯ ನಿಯಮಗಳ ಅನುಸಾರ ಪ್ರತಿವರ್ಷ `ಜೀವನ ಚರಿತ್ರೆ/ಅತ್ಮಕಥನ’ ಪ್ರಕಾರದಲ್ಲಿ ಅತ್ಯುತ್ತಮವೆಂದು ನಿರ್ಣಯಿಸಲ್ಪಡುವ ಕೃತಿಗೆ ಬಹುಮಾನವಾಗಿ ನೀಡಲಾಗುವುದು. ಇದು ಪ್ರತ್ಯೇಕ ಬಹುಮಾನವಾಗಿರದೆ, `ಪುಸ್ತಕ ಬಹುಮಾನ ಯೋಜನೆ’ ಯಲ್ಲಿನ 7ನೇ ಸಾಹಿತ್ಯ ಪ್ರಕಾರವಾದ `ಜೀವನ ಚರಿತ್ರೆ/ಆತ್ಮಕಥನ’ವೇ ಆಗಿರುತ್ತದೆ.

3. ಈ ಬಹುಮಾನವನ್ನು `ಸಿಂಪಿ ಲಿಂಗಣ್ಣ ದತ್ತಿನಿಧಿ ಬಹುಮಾನ’ ಎಂದು ಕರೆಯಲಾಗುವುದು.