ಶ್ರೀಮತಿ ಜಲಜಾ ಶ್ರೀಪತಿ ಆಚಾರ್ಯ ಗಂಗೂರ್ ದತ್ತಿ ಬಹುಮಾನ

ಶ್ರೀಮತಿ ಜಲಜಾ ಶ್ರೀಪತಿ ಆಚಾರ್ಯ ಗಂಗೂರ್ ದತ್ತಿ ಬಹುಮಾನ

  • ದಿ|| ಶ್ರೀಮತಿ ಜಲಜಾ ಶ್ರೀಪತಿ ಆಚಾರ್ಯ ಗಂಗೂರ್ ಅವರ ಹೆಸರಿನಲ್ಲಿ ಒಂದು ದತ್ತಿನಿಧಿಯನ್ನು ಸ್ಥಾಪಿಸಲು ರೂ.5,00,000/-(ರೂಪಾಯಿ ಐದು ಲಕ್ಷ ಮಾತ್ರ)ಗಳನ್ನು ಶ್ರೀ ಮುಕುಂದ ಗಂಗೂರ್, ಶ್ರೀ ಸತ್ಯಜ್ಞಾನ ಪ್ರಕಾಶನ, ಬಳ್ಳಾರಿ ಇವರು ನೀಡಿರುತ್ತಾರೆ.
  • ಸದರಿ ಮೊತ್ತವನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅನುದಾನ ಖಾತೆಯನ್ನು ಹೊಂದಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಲ್ಲಿ ನಿಶ್ಚಿತ ಠೇವಣಿಯಾಗಿ ಇಟ್ಟು, ಅದರಿಂದ ಬರುವ ಬಡ್ಡಿಯನ್ನು ಪುಸ್ತಕ ಬಹುಮಾನ ಯೋಜನೆ’ಯ ನಿಯಮಗಳ ಅನುಸಾರ ಪ್ರತಿವರ್ಷ ದಾಸ ಸಾಹಿತ್ಯ ಪ್ರಕಾರದಲ್ಲಿ ಅತ್ಯುತ್ತಮವೆಂದು ನಿರ್ಣಯಿಸಲ್ಪಡುವ ಕೃತಿಗೆ ಬಹುಮಾನವಾಗಿ ನೀಡಲಾಗುವುದು.
  • ಇದು ಪ್ರತ್ಯೇಕ ಬಹುಮಾನವಾಗಿರದೆ `ಪುಸ್ತಕ ಬಹುಮಾನ’ ಯೋಜನೆಯಡಿ `ದಾಸ ಸಾಹಿತ್ಯ’ಕ್ಕೆ ಸಂಬಂಧಿಸಿದ ಕೃತಿಗೆ ನೀಡುವ ಬಹುಮಾನವಾಗಿರುತ್ತದೆ.
  • ಈ ಬಹುಮಾನವನ್ನು “ಶ್ರೀಮತಿ ಜಲಜಾ ಶ್ರೀಪತಿ ಆಚಾರ್ಯ ಗಂಗೂರ್ ದತ್ತಿ ಬಹುಮಾನ” ಎಂದು ಕರೆಯಲಾಗುವುದು.