ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರು

ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರು


2015ನೆಯ ವರ್ಷದ ಗೌರವ ಪ್ರಶಸ್ತಿ ಪುರಸ್ಕೃತರು

ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಈ ಕೆಳಕಂಡ 5 ಜನ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2015ನೆಯ ವರ್ಷದ ಗೌರವ ಪ್ರಶಸ್ತಿಯನ್ನು ಐವತ್ತು ಸಾವಿರ ರೂಪಾಯಿಗಳ ನಗದು ಹಾಗೂ ಪ್ರಮಾಣಪತ್ರದೊಂದಿಗೆ ನೀಡಬೇಕೆಂದು ಅಕಾಡೆಮಿ ಅಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ: 26-09-2016 ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

1)  ಡಾ. ಕೃಷ್ಣಮೂರ್ತಿ ಹನೂರು
2)  ಡಾ. ಎಚ್.ಎಸ್. ಶಿವಪ್ರಕಾಶ್
3)  ಡಾ. ಎಲ್. ಹನುಮಂತಯ್ಯ
4)  ಶ್ರೀಮತಿ ನೇಮಿಚಂದ್ರ
5)  ಡಾ. ಎಚ್. ನಾಗವೇಣಿ

ಸಿ.ಎಚ್.ಭಾಗ್ಯಪ್ರೊ. ಮಾಲತಿ ಪಟ್ಟಣಶೆಟ್ಟಿ
ರಿಜಿಸ್ಟ್ರಾರ್ಅಧ್ಯಕ್ಷರು

2014ನೆಯ ವರ್ಷದ ಗೌರವ ಪ್ರಶಸ್ತಿ ಪುರಸ್ಕೃತರು

ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಈ ಕೆಳಕಂಡ 5 ಜನ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2014ನೆಯ ವರ್ಷದ ಗೌರವ ಪ್ರಶಸ್ತಿಯನ್ನು ನೀಡಬೇಕೆಂದು ಅಕಾಡೆಮಿ ಅಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ: 29-03-2016ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಸಿ.ಎಚ್.ಭಾಗ್ಯಪ್ರೊ. ಮಾಲತಿ ಪಟ್ಟಣಶೆಟ್ಟಿ
ರಿಜಿಸ್ಟ್ರಾರ್ಅಧ್ಯಕ್ಷರು

 

1) ಷ. ಶೆಟ್ಟರ್:- 1935ರಲ್ಲಿ ಜನಿಸಿದ ಷ. ಶೆಟ್ಟರ್ ಅವರು ಮೈಸೂರು, ಧಾರವಾಡ, ಕೇಂಬ್ರಿಡ್ಜ್ ನಲ್ಲಿ ಉನ್ನತ ವ್ಯಾಸಂಗ ಪಡೆದಿದ್ದಾರೆ.
sha-shetter ಇತಿಹಾಸ, ಪ್ರಾಕ್ತನಶಾಸ್ತ್ರ, ಮಾನವಶಾಸ್ತ್ರ, ಕಲಾಇತಿಹಾಸ, ದರ್ಶನಶಾಸ್ತ್ರ, ಹಳೆಗನ್ನಡ ಕಾವ್ಯ ಕುರಿತು 27ಕ್ಕೂ ಹೆಚ್ಚು ಸಂಶೋಧನಾ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಶ್ರವಣಬೆಳಗೊಳ, ಸಾವನ್ನರಸಿ, ಬಾದಾಮಿ ಚಾಳುಕ್ಯರ ಶಾಸನ ಸಾಹಿತ್ಯ, ಶಂಗಂ ತಮಿಳಗಂ, ಹಳಗನ್ನಡ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ, ಇವೇ ಮೊದಲಾದ ಕೃತಿಗಳಲ್ಲದೆ ಇಂಗ್ಲಿಷಿನಲ್ಲಿಯೂ ಅನೇಕ ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ದೇಶ ವಿದೇಶಗಳಲ್ಲಿ ಇವರ ಸಂಶೋಧನೆ ಮನ್ನಣೆ ಪಡೆದಿದೆ. ಭಾರತೀಯ ಇತಿಹಾಸ ಅನುಸಂಧಾನ ಪರಿಷತ್, ದಕ್ಷಿಣ ಭಾರತ ಇತಿಹಾಸ ಅನುಸಂಧಾನ ಪರಿಷತ್ ಹಾಗೂ ಕರ್ನಾಟಕ ಇತಿಹಾಸ ಅನುಸಂಧಾನ ಪರಿಷತ್ ಗಳ ಸರ್ವಾಧ್ಯಕ್ಷ ಸ್ಥಾನಗಳನ್ನು ಅಲಂಕರಿಸಿದ್ದಾರೆ. ಪ್ರಸ್ತುತ ಬೆಂಗಳೂರಿನ ನಿಯಾಸ್ ನಲ್ಲಿ ಎಮಿರೆಟಸ್ ಪ್ರಾಧ್ಯಾಪಕ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವೂ ಸೇರಿದಂತೆ ಅನೇಕ ಪ್ರಶಸ್ತಿ ಸನ್ಮಾನಗಳೂ ಸಂದಿವೆ.

2) ಡಾ. ಜಿ. ರಾಮಕೃಷ್ಣ:- 17-6-1939ರಲ್ಲಿ ಮಾಗಡಿ ಜಿಲ್ಲೆಯ ಕೆಂಪಸಾಗರದಲ್ಲಿ ಜನಿಸಿದ ಗಂಪಲಹಳ್ಳಿ ರಾಮಕೃಷ್ಣ dr-dee-ramakrishnaಅವರು ಎಂ.ಎ. ಸಂಸ್ಕೃತ, ಎಂ.ಎ. ಇಂಗ್ಲಿಷ್ ಪದವಿಯನ್ನು ಪಡೆದಿದ್ದಾರೆ. ಉಪನ್ಯಾಸಕರಾಗಿ, ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ತಮ್ಮ ವೈಚಾರಿಕತೆ ಪ್ರಖರ ಚಿಂತನೆಗೆ ಜಿ. ರಾಮಕೃಷ್ಣ ಅವರು ಹೆಸರಾಗಿದ್ದಾರೆ. ವಿಚಾರ ಸಾಹಿತ್ಯ, ಮುನ್ನೋಟ, ವೈಚಾರಿಕ ಜಾಗೃತಿ, ದೇವಿಪ್ರಸಾದ್ ಮತ್ತು ಲೋಕಾಯತ ದರ್ಶನ, ಚೆಗೆವಾರ ಕೃತಿಗಳಲ್ಲದೆ ಹಲವಾರು ಮಹತ್ವದ ಕೃತಿಗಳನ್ನು ಇಂಗ್ಲಿಷ್‍ನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಸಂಪಾದಿತ ಕೃತಿಗಳು ಕೂಡ ಮಹತ್ವದ್ದಾಗಿದೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಅಲ್ಲದೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರು ಅನೇಕ ಅಂತರಾಷ್ಟ್ರೀಯ ಸಮ್ಮೇಳನಗಳಲ್ಲಿ, ದೇಶ ವಿದೇಶಗಳಲ್ಲಿ ಭಾಗಿಯಾಗಿದ್ದಾರೆ. ಹೊಸತು ಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

3) ಸುಬ್ರಾಯ ಚೊಕ್ಕಾಡಿ:- 29-6-1940ರಲ್ಲಿ ಜನಿಸಿದ ಸುಬ್ರಾಯ ಚೊಕ್ಕಾಡಿ ಅವರು ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ subraya-chokkadi ಚೊಕ್ಕಾಡಿ ಕಿರುಗ್ರಾಮದಲ್ಲಿ ನೆಲೆಸಿದ್ದಾರೆ. ಅಧ್ಯಾಪಕರಾಗಿಯೂ ಸೇವೆ ಸಲ್ಲಿಸಿರುವ ಇವರು ತೆರೆ, ಬೆಟ್ಟವೇರಿದ ಮೇಲೆ, ಮೊನ್ನೆ ಸಿಕ್ಕವರು, ಇದರಲ್ಲಿ ಅದು , ಹಾಡಿನ ಲೋಕ, ನಿಮ್ಮವೂ ಇರಬಹುದು ಕವನ ಸಂಕಲನಗಳಲ್ಲದೆ ಸಂತೆ ಮನೆ, ಬೇರುಗಳು, ಮೊದಲಾದ ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಮುದ್ದಣ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

 

4) ಪ್ರೊ. ಸುಕನ್ಯಾ ಮಾರುತಿ :- 1-3-1956ರಲ್ಲಿ ಕೊಟ್ಟೂರಿನಲ್ಲಿ ಜನಿಸಿದ ಸುಕನ್ಯಾ ಮಾರುತಿ ಅವರು ಕನ್ನಡ ಎಂ.ಎ. sukanya-maruthiಪದವಿಯನ್ನು ಪಡೆದು ಧಾರವಾಡದ ಜೆ.ಎಸ್.ಎಸ್. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಪರಿಸರದಲ್ಲಿ ಪಂಚಾಗ್ನಿ ಮಧ್ಯೆ, ತಾಜಮಹಲಿನ ಹಾಡು, ಬಿಂಬದೊಳಗಣ ಮಾತು ಇವು ಇವರ ಕವನ ಸಂಗ್ರಹಗಳು. ಸಂಕೃತಿ, ಪ್ರಶಾಂತ, ಪ್ರಣಯಿನಿ ಕೃತಿಗಳ ಸಹಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಸಾಮಾಜಿಕವಾಗಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಸುಕನ್ಯಾ ಮಾರುತಿ ಅವರಿಗೆ 1998ರಲ್ಲಿ ಕರ್ನಾಟಕ ಸರ್ಕಾರದಿಂದ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿ ಅಲ್ಲದೆ ಹಲವಾರು ಸಂಘ-ಸಂಸ್ಥೆಗಳ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

5) ಸವಿತಾ ನಾಗಭೂಷಣ:- 1961 ಮೇ 11ರಂದು ಚಿಕ್ಕಮಗಳೂರಿನಲ್ಲಿ ಜನಿಸಿದ ಸವಿತಾ ನಾಗಭೂಷಣ ಅವರು ಸೂಕ್ಷ್ಮ savitha-nagabhooshanಸಂವೇದನೆಯ ಕವಿ. ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಸೇವೆ ಸಲ್ಲಿಸಿದ್ದು ಅಂಚೆ ಇಲಾಖೆಯಲ್ಲಿ. ನಾ ಬರುತ್ತೇನೆ ಕೇಳು, ಚಂದ್ರನನ್ನು ಕರೆಯಿರಿ ಭೂಮಿಗೆ, ಹೊಳೆ ಮಗಳು, ಜಾತ್ರೆಯಲ್ಲಿ ಶಿವ, ಆಕಾಶಮಲ್ಲಿಗೆ, ದರುಶನ, ಮೊದಲಾದವು ಇವರ ಕವನ ಸಂಗ್ರಹಗಳು. ಇದಲ್ಲದೆ ಕಾದಂಬರಿ , ವೈಚಾರಿಕ ಲೇಖನಗಳನ್ನು ಬರೆದಿದ್ದಾರೆ. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವೂ ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

 

2012 ರ ಗೌರವ ಪ್ರಶಸ್ತಿ ಪುರಸ್ಕೃತರು

ಕನ್ನಡ ಸಾಹಿತ್ಯಕ್ಕೆ ನೀಡಿರುವ ಅಮೂಲ್ಯವಾದ ಸೇವೆಯನ್ನು ಪರಿಗಣಿಸಿ ಈ ಕೆಳಕಂಡ ಹತ್ತು ಜನ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2011 ಮತ್ತು 2012ನೆಯ ವರ್ಷದ ಗೌರವ ಪ್ರಶಸ್ತಿಯನ್ನು ನೀಡಬೇಕೆಂದು ಅಕಾಡೆಮಿ ಅಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ದಿನಾಂಕ: 17-12-2014ರಂದು ನಡೆದ ಸರ್ವಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಲಾಯಿತು.

ಸಿ.ಎಚ್.ಭಾಗ್ಯಪ್ರೊ. ಮಾಲತಿ ಪಟ್ಟಣಶೆಟ್ಟಿ
ರಿಜಿಸ್ಟ್ರಾರ್ಅಧ್ಯಕ್ಷರು

 

1) ಶ್ರೀ ಚಂದ್ರಪ್ಪ ಹೆಬ್ಬಾಳ್ಕರ್:- (75) ದಲಿತ ಸಂವೇದನೆಯ ಮಹತ್ವದ ಲೇಖಕರಲ್ಲಿ ಒಬ್ಬರಾಗಿರುವ ಶ್ರೀಯುತರು 18ಕ್ಕೂ ಹೆಚ್ಚು ವಿಶಿಷ್ಟ ಕೃತಿಗಳನ್ನು ರಚಿಸಿದ್ದಾರೆ. ವಚನಕಾರ ಉರಿಲಿಂಗ ಪೆದ್ದಿಯ ಕುರಿತು ಮಹತ್ವದ ಕೃತಿಯನ್ನಲ್ಲದೆ, ಹಲವಾರು ಕವನ ಸಂಕಲನ, ವೈಚಾರಿಕ ಕೃತಿ, ಕಾದಂಬರಿ, ಸಂಪಾದಿತ ಕೃತಿಗಳು, ಮೊದಲಾದ ಸಾಹಿತ್ಯ ಪ್ರಕಾರಗಳಿಗೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ವೈಜ್ಞಾನಿಕ ವಿಚಾರಗಳನ್ನು ಪ್ರಚಾರ ಮಾಡುವ ಮೂಲಕ ಆರೋಗ್ಯ ಸಮಾಜದ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.

2) ಪ್ರೊ. ಎಂ.ಎಚ್. ಕೃಷ್ಣಯ್ಯ:- (78 ವರ್ಷ) ತಮ್ಮ ಬಹುಶ್ರುತ ಪಾಂಡಿತ್ಯಕ್ಕೆ ಹೆಸರಾಗಿರುವ ಎಂ.ಎಚ್.ಕೃಷ್ಣಯ್ಯ ಅವರದು ಕನ್ನಡ ವಿಮರ್ಶಾ ಲೋಕದಲ್ಲಿ ಪ್ರಮುಖವಾದ ಹೆಸರು. ವೃತ್ತಿಯಿಂದ ಪ್ರಾಧ್ಯಾಪಕರಾಗಿ ನಿವೃತ್ತರಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷರೂ ಆಗಿದ್ದ ಎಂ.ಎಚ್.ಕೃಷ್ಣಯ್ಯನವರು ಶಿಷ್ಯ ಬಳಗದಲ್ಲಿ ಆಪ್ತರಲ್ಲಿ ಎಂಎಚ್ಕೆ ಎಂದೇ ಪ್ರಸಿದ್ಧರು. ತಮ್ಮ ಆಳವಾದ ವಿದ್ವತ್ತಿನಿಂದ ಅಪಾರ ಶಿಷ್ಯವರ್ಗವನ್ನು ಬೆಳೆಸಿರುವ ಎಂಎಚ್ಕೆ ಅವರು ಕಾವ್ಯಭಾಷೆ, ಆಲೋಕನ (ಸಾಹಿತ್ಯ ವಿಮರ್ಶೆ) ಶೃಂಗಾರ ಲಹರಿ (ಕಲಾವಿಮರ್ಶೆ), ರೂಪ ಶಿಲ್ಪಿ ಬಸವಯ್ಯ ಶಿಲ್ಪ ಕಲೆ- ಕೃತಿಗಳಲ್ಲದೆ ಸಂಗೀತ, ಚಲನಚಿತ್ರ, ರಂಗಭೂಮಿಯನ್ನು ಕುರಿತಂತೆ ಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ.

3) ಪ್ರೊ. ಎಸ್.ಜಿ. ಸಿದ್ಧರಾಮಯ್ಯ:- (68 ವರ್ಷ) ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರು ಕಾವ್ಯ, ನಾಟಕ, ವಿಮರ್ಶೆ, ಈ ಮೂರೂ ಸಾಹಿತ್ಯ ಪ್ರಕಾರಗಳಲ್ಲಿ ಹಲವಾರು ಮಹತ್ವದ ಕೃತಿಗಳನ್ನು ರಚಿಸಿದ್ದಾರೆ. ಗಾಲ್ಫ್ ಉಬ್ಬಿನ ಮೇಲೆ, ಕಾಡುವ ಬೇಲಿ ಹೂ,ಮರುಜೇವಣಿ ಇತ್ಯಾದಿ ಕವನ ಸಂಕಲನಗಳು. ನಿಶ್ಯಬ್ದದ ಜಾಡು, ಎಡೆಕುಂಟೆ ಗೆಣೆಸಾಲು, ಕೇಡಿಲ್ಲವಾಗಿ, ಮೊದಲಾದ ವಿಮರ್ಶಾ ಸಂಕಲನಗಳು. ದಂಡೆ, ದಾಳ, ಮೊದಲಾದ ನಾಟಕ ಕೃತಿಗಳನ್ನು ರಚಿಸಿರುವ ಎಸ್. ಜಿ. ಸಿದ್ದರಾಮಯ್ಯ ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

4) ಶ್ರೀ ಯಳನಾಡು ಅಂಜನಪ್ಪ,(72 ವರ್ಷ) ಯಳನಾಡು ಅಂಜನಪ್ಪನವರು ಸಾಹಿತಿಯೂ ಹೌದು, ಸಾಹಿತ್ಯ ಸಂಘಟಕರೂ ಹೌದು. ಮಿಂಚು (ಕವನ), ನೇಣು ಮತ್ತು ಇತರ ಕಥೆಗಳು (ಕಥಾಸಂಕಲನ), ಧರ್ಮ ಮತ್ತು ಮುಕ್ತವಿಚಾರ (ವಿಚಾರ ಸಾಹಿತ್ಯ), ಹಗಲುವೇಷದವರ ಸಂಸ್ಕøತಿ, (ಉಪಸಂಸ್ಕøತಿ ಅಧ್ಯಯನ) ಮೊದಲಾದ ಮೌಲಿಕ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.

5) ಡಾ. ಹನುಮಾಕ್ಷಿ ಗೋಗಿ- (59 ವರ್ಷ) ವೃತ್ತಿಯಿಂದ ಪ್ರಾಧ್ಯಾಪಕರಾಗಿರುವ ಡಾ. ಹನುಮಾಕ್ಷಿ ಗೋಗಿ ಅವರು ಕನ್ನಡದ ಮಹತ್ವದ ಸಂಶೋಧಕರಲ್ಲಿ ಒಬ್ಬರು. ಬೀದರ್ ಜಿಲ್ಲೆಯ ಶಾಸನಗಳು, ಲಕ್ಕುಂಡಿಯ ಶಾಸನಗಳು, ಹುಬ್ಬಳ್ಳಿ ತಾಲ್ಲೂಕಿನ ಶಾಸನಗಳು: ಸಾಂಸ್ಕøತಿಕ ಅಧ್ಯಯನ, ಮೊದಲಾದ ಶಾಸನಗಳ ಬಗ್ಗೆ 20ಕ್ಕೂ ಹೆಚ್ಚು ಸಂಶೋಧನಾ ಕೃತಿಗಳನ್ನು ರಚಿಸಿ, ಸಂಪಾದಿಸಿದ್ದಾರೆ.

2011 ರ ಗೌರವ ಪ್ರಶಸ್ತಿ ಪುರಸ್ಕೃತರು
1) ಡಾ. ಮ.ಸು. ಕೃಷ್ಣಮೂರ್ತಿ:- (80) ಡಾ. ಮ.ಸು. ಕೃಷ್ಣಮೂರ್ತಿ ಅವರು ಕನ್ನಡ ಮತ್ತು ಹಿಂದಿ ಈ ಎರಡೂ ಭಾಷೆಗಳ ವಿರಳ ವಿದ್ವಾಂಸರಲ್ಲಿ ಒಬ್ಬರು. ಸಣ್ಣಕತೆ, ಲಲಿತಪ್ರಬಂಧ, ರೇಖಾಚಿತ್ರ, ಕಾದಂಬರಿ ಕ್ಷೇತ್ರಗಳಲ್ಲಿ ಕೃಷಿ ಮಾಡಿರುವ ಶ್ರೀಯುತರು ಸಿದ್ಧಸಾಹಿತ್ಯ, ಉತ್ತರದ ಸಂತ ಪರಂಪರೆ, ಹಿಂದಿ ಸಾಹಿತ್ಯ , ಸೂಫಿ ಪ್ರೇಮಕಾವ್ಯ, ಬಸವರಾಜ ಮಾರ್ಗ, ಮೊದಲಾದ ಅಪರೂಪದ ಗ್ರಂಥಗಳ ಕತೃ.

2) ಪ್ರೊ. ಬಿ.ವಿ. ವೀರಭದ್ರಪ್ಪ:- (79) ಪ್ರಖರ ವೈಚಾರಿಕತೆಗೆ ಹೆಸರಾದ ಪ್ರೊ. ಬಿ.ವಿ. ವೀರಭದ್ರಪ್ಪ ಅವರ ಹೆಸರಾಂತ ಕೃತಿಗಳೆಂದರೆ `ವೇದಾಂತ ರೆಜಿಮೆಂಟ್ ಭಗವದ್ಗೀತೆ- ಒಂದು ವೈಚಾರಿಕ ಒಳನೋಟ’ `ವಾಸ್ತು- ಎಷ್ಟು ವಾಸ್ತವ’, `ಧರ್ಮ ಮತ್ತು ವೈಚಾರಿಕತೆ’ ವೇದಗಳಲ್ಲಿ ಜನಸಾಮಾನ್ಯರು, ಭಾರತೀಯ ಮಹಿಳೆಯ ಸಾಂಸ್ಕøತಿಕ ವಿಕಾಸ, ಪೂರ್ವ ನಿಶ್ಚಿತ ದೃಷ್ಟಿಕೋನ, ಮೊದಲಾದ ಅಮೂಲ್ಯ ಕೃತಿಗಳನ್ನು ರಚಿಸಿದ್ದಾರೆ.

3) ಡಾ. ವಿಜಯಾ ಸುಬ್ಬರಾಜ್:- (69) ಕನ್ನಡ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿರುವ ಡಾ. ವಿಜಯಾ ಸುಬ್ಬರಾಜ್ `ತ್ರಿಶಂಕು’, ಏನು ಹೇಳಲಿ ಗೆಳೆಯ, ವಸುಂಧರೆಯ ಪ್ರಾಯ, ಮೊದಲಾದ ಕವನ ಸಂಕಲನಗಳು, ಹರಿದತ್ತ ಹರಿವಚಿತ್ತ, ತಪ್ಪಿದ ಹೆಜ್ಜೆಗಳು-ಮೊದಲಾದ ಕಾದಂಬರಿಗಳು, ಮಾನಿಷಾದ , ಅದೇ ಮುಖ – ಮೊದಲಾದ ಕಥಾಸಂಕಲನಗಳನ್ನು, ಪಾಂಚಾಲಿ, ಪಾದ್ರಿಯೊಬ್ಬನ ಕಥೆ, ಮೊದಲಾದ ನಾಟಕಗಳನ್ನಲ್ಲದೆ, ಹಲವಾರು ಸಂಶೋಧನಾ, ವಿಮರ್ಶಾ ಕೃತಿಗಳು, ಜೀವನಚರಿತ್ರೆ, ಅನುವಾದ, ಮಕ್ಕಳ ಸಾಹಿತ್ಯವನ್ನೂ ಒಳಗೊಂಡಂತೆ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

4) ಡಾ. ಸತ್ಯಾನಂದ ಪಾತ್ರೋಟ:- (55 ವರ್ಷ) ಜಾಜಿ ಮಲ್ಲಿಗೆ, ಕರಿನೆಲದ ಕಲೆಗಳು- ಕವನ ಸಂಕಲನ, ರಕ್ತದ ಹೊಳೆ ಬೆಂಕಿಯ ಮಳೆ, ಸಂಪಾದನೆ, ಮತ್ತೊಬ್ಬ ಏಕಲವ್ಯ-ನಮಗೆ ಯಾರೂ ಇಲ್ವೋ ಯಪ್ಪಾ, ಮೊದಲಾದ ದಲಿತ ಸಂವೇದನೆಯ ಕೃತಿಗಳನ್ನಲ್ಲದೆ ಹಲವಾರು ಶ್ರೇಷ್ಠ ಲೇಖನಗಳನ್ನು ರಚಿಸಿದ್ದಾರೆ.

5) ಡಾ. ಕೆ. ಷರೀಫಾ:- (57 ವರ್ಷ) ನೂರೇನಳ ಅಂತರಂಗ, ಮುಮ್ತಾಜ್ ಮಹಲ್, ಪಾಂಚಾಲಿ, ಬುರ್ಖಾ ಪ್ಯಾರಡೈಸ್, ಬಿಡುಗಡೆಯ ಕವಿತೆಗಳು, ಮೊದಲಾದ ಕವನ ಸಂಕಲನಗಳು, ಸಂವೇದನೆ (ವಿಮರ್ಶೆ) ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮುಸ್ಲಿಂ ಮಹಿಳಾ ಸಂವೇದನೆ (ಸಂಶೋಧನೆ) ಮೊದಲಾದ ವಿಶಿಷ್ಟ ಕೃತಿಗಳ ಮೂಲಕ ಹೆಸರಾಗಿದ್ದಾರೆ.

2010 ರ ವರೆಗೆ ಗೌರವ ಪ್ರಶಸ್ತಿ ಪುರಸ್ಕೃತರು